Thursday, July 24, 2008

’ಮೈಸೂರು ಪುಟ್ಟಲಿಂಗಪ್ಪ ಶಂಕರ್,’ ಕನ್ನಡಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ನಟನೆ, ದಿಗ್ದರ್ಶನ, ಚಿತ್ರನಿರ್ಮಾಣ, ವಿತರಣೆ ಹಾಗೂ ಸಂಬಂಧಿಸಿದ ಎಲ್ಲಾಮಜಲುಗಳನ್ನು ಚೆನ್ನಾಗಿ ಅರಿತಿದ್ದರು. ಪುಟ್ಟಲಿಂಗಪ್ಪ, ಗಂಗಮ್ಮ ದಂಪತಿಗಳ ಪ್ರೀತಿಯ ಮೂರನೆಯ ಸಂತಾನವಾಗಿ ಭರಣಿ ನಕ್ಷತ್ರದಲ್ಲಿ ಜನಿಸಿದರು. ೧೬ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪತ್ನಿ, ಮಂಜುಳಾ, ಪುತ್ರಿ, ಶೋಭಾ, ಇಬ್ಬರು ಪುತ್ರರು, ತಿಲಕ್, ಹಾಗೂ ವಿರೂಪಾಕ್ಷ. ಕೊನೆಯವರು ತೀರಿಕೊಂಡಿದ್ದಾರೆ. ಶ್ರೇಷ್ಟ ಖಳನಾಯಕನೆಂದು ಹೆಸರುಮಾಡಿದ್ದರು. ೧೯೬೨ ರಲ್ಲಿ ಬಿಡುಗಡೆಯಾದ ಸತ್ಯಹರಿಶ್ಚಂದ್ರ ಕಪ್ಪು-ಬಿಳುಪಿನ ಚಲನಚಿತ್ರದಲ್ಲಿ ’ವೀರಬಾಹು’ ವಿನ ಪಾತ್ರದಲ್ಲಿ ಒಳ್ಳೆಯ ಅಭಿನಯನವನ್ನು ತೋರಿಸಿ ಚಿತ್ರರಸಿಕರ ಮನಒಲಿಸಿಕೊಂಡರು. ಅವರ ನಿರ್ದೇಶನದ, ಡಾ. ರಾಜ್ ನಟಿಸಿದ ’ಗಂಧದಗುಡಿ ’ ಚಿತ್ರ ಎಲ್ಲರ ಮನಸೆಳೆಯಿತು. ಇದರ ಎರಡನೆಯ ಆವರ್ತಿಯಲ್ಲಿ ಶಿವರಾಜಕುಮಾರ್ ಅಭಿನಯಿಸಿದ್ದರು. ಕಾಡಿನ ಸಂರಕ್ಷಣೆ ಹಾಗೂ, ಪರಿಸರದ ಬಗ್ಗೆ ಅವರು ಯಾವಾಗಲು ಕಾಳಜಿವಹಿಸುತ್ತಿದ್ದರು. ೧೯೬೮ ರಲ್ಲಿ, ’ಕಾಡಿನ ರಹಸ್ಯ’ ಚಿತ್ರಬಿಡುಗಡೆಯಾಯಿತು.
೭೩ ವರ್ಷದ, ಮೈಸೂರು ಪುಟ್ಟಲಿಂಗಪ್ಪ ಶಂಕರ್ ರವರು, ಮೈಸೂರಿನ, ’ಕಾಳಿದಾಸ ರಸ್ತೆಯಲ್ಲಿರುವ ತಮ್ಮ ಸ್ವಗೃಹ, ಮಂಜುನಾಥನಿಲಯದಲ್ಲಿ, ಇದೇ ಜುಲೈ, ೧೭ ರಂದು ನಿಧನರಾದರು. ಮನೆಯಲ್ಲೇ ಜಾರಿಬಿದ್ದು ಸೊಂಟದ ಮೂಳೆಗೆ ಪೆಟ್ಟಾಗಿತ್ತು. ವಿಕ್ರಮ್ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಸ್ವಲ್ಪಗುಣಹೊಂದಿ ಮನೆಗೆ ವಾಪಸ್ ಬಂದಿದ್ದರು. ಆದರೆ, ಪಿತ್ತಕೋಶದ ಕ್ಯಾನ್ಸರ್ ಅವರನ್ನು ಬಹಳಸಮಯದಿಂದ ಕಾಡಿಸುತ್ತಿತ್ತು. ಅಂತಿಮ ಸಂಸ್ಕಾರವನ್ನು, ವಿದ್ಯಾರಣ್ಯಪುರದ,’ ವೀರಶೈವ ರುದ್ರಭೂಮಿ,’ ಯಲ್ಲಿ ನೆರವೇರಿಸಲಾಯಿತು.ರತ್ನಮಂಜರಿ, ಚಿತ್ರದಲ್ಲಿ ಪಾದಾರ್ಪಣೆಮಾಡಿದ, ಎಂ.ಪಿ. ಶಂಕಾರ್, ’ಕಲ್ಲರಳಿ ಹೂವಾಗಿ ’ ಚಿತ್ರದ ಮೂಲಕ ತಮ್ಮ ವೃತ್ತಿಜೀವನಕ್ಕೆ ಮಂಗಳ ಹಾಡಿದರು. ಹಾಸ್ಯಪ್ರಧಾನವಾದ ’ನಾರದವಿಜಯ,’ ಹಾಗೂ”ಗಿಡ್ಡೂದಾದ,’ ಚಿತ್ರಗಳಲ್ಲೂ ಪಾತ್ರವಹಿಸಿ ರಸಿಕರಮನಸ್ಸನ್ನು ರಂಜಿಸಿದ್ದರು.
’ಭರಣಿ ಕಲಾತಂಡ’, ಅವರ ನೆಚ್ಚಿನ, ಪ್ರೀತಿಯ ನಾಟಕರಂಗಪ್ರಾಕಾರ :
ಇದರಡಿಯಲ್ಲಿ ’ಗೌತಮ ಬುದ್ಧ’, ಸೊಹ್ರಾಬ್ ರುಸ್ತುಂ, ಗದಾಯುದ್ಧ, ಕನಕದಾಸ ನಾಟಕಗಳನ್ನು ಆಡಿಸಿ, ತಾವೂ ಅಭಿನಯಿಸಿದ್ದರು. ಅವರ ಪೂಜ್ಯ ತಂದೆಯರ ಅಭಿಲಾಷೆಯಂತೆ, ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ್ದರು.
ಶಂಕರ್ ಗಳಿಸಿದ ಪ್ರಶಸ್ತಿಗಳು, ಹಾಗೂ ಬಿರುದುಬಾವಲಿಗಳು :
ನಟಶಾರ್ದೂಲ, ಕಲಾಶಾರ್ದೂಲ, ಮೈಸೂರುಹುಲಿ, ಕಲಾಸೇವಾಧುರೀಣ, ಕನ್ನಡಭೂಷಣ, ಸಾಹಸೀಚಿತ್ರರತ್ನ, ಕರುಣಾರತ್ನ, ಸಾಗರ ಪ್ರಶಸ್ತಿಗಳು.೧೯೫೩-೫೪ ರಲ್ಲಿ ಬನುಮಯ್ಯ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಕಾಡುಕುರುಬನ ಪಾತ್ರವನ್ನು ಯಶಸ್ವಿಯಾಗಿ ಅನುಭವಿಸಿದ್ದರು. ಮೈಸೂರ್ ವಿದ್ಯುತ್ಶಕ್ತಿ ಆಫೀಸಿನಲ್ಲಿ ದಿನಗೂಲಿ ಕೆಲಸಮಾಡುತ್ತಿದ್ದರು. ೧೯೫೫ ರಲ್ಲಿ, ಮೈಸೂರಿನ ರೈಲ್ವೆಕಾರ್ಖಾನೆಯಲ್ಲಿ ನೌಕರಿಮಾಡಿದ್ದರು. ೧೯೫೬ ರಲ್ಲಿಮೈಸೂರ್ ದಸರಾಹಬ್ಬದಸಮಯದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆಗಿನ ಮೈಸೂರಿನ ಮುಖ್ಯಮಂತ್ರಿ, ಬಿ. ಡಿ. ಜತ್ತಿಯವರ ಹಸ್ತದಿಂದ ಬಹುಮಾನ ಗಿಟ್ಟಿಸಿದ್ದರು. ತಮ್ಮ ಕೊನೆಯದಿನಗಳಲ್ಲಿ ವಿನಿವಿಂಕ್ ಶಾಸ್ತ್ರಿಗಳ ಜೊತೆವ್ಯವಹಾರ ಸಂಬಂಧಬೆಳೆಸಿ, ೧೫ ಲಕ್ಷರೂಪಾಯಿಗಳಷ್ಟು ಹಣವನ್ನು ನಷ್ಟಮಾಡಿಕೊಂಡಿದ್ದರು. ಇದರಿಂದ ಬಹಳವಾಗಿ ನೊಂದಿದ್ದರು.
ಎಮ್. ಪಿ. ಶಂಕರ್ ರವರ ಚಲನಚಿತ್ರಗಳು :
* ಕಾಡಿನರಾಜ
* ಮೃಗಾಲಯ
* ರಾಮಲಕ್ಷ್ಮಣ
* ನಾನೇರಾಜ
* ಕಾಡಿನರಹಸ್ಯ
* ಬೆಟ್ಟದಹುಲಿ
* ನ್ಯಾಯವೇದೇವರು
* ಬಂಗಾರದಮನುಷ್ಯ
* ನಾಗರಹಾವು
* ದೂರದಬೆಟ್ಟ
* ಗಂಧದಗುಡಿ
* ಭೂತಯ್ಯನ ಮಗ ಅಯ್ಯು
* ಕಲ್ಲರಳಿಹೂವಾಗಿ(ಕೊನೆಯ ಚಿತ್ರ)
-ವಿವಿಧ ಮೂಲಗಳಿಂದ.

1 comment:

aallrounder said...

Bahal chennagide. Tumba dinadind barediralilla